ಜ್ಯೋತಿ ಸ್ವರೂಪಿಣಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬8 ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಜ್ಯೋತಿರಾಗಅಥವಾ ಜ್ಯೋತಿ ಎಂದು ಹೆಸರಿಸಿದ್ದಾರೆ. . == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹನ್ನರಡನೆಯ ಆದಿತ್ಯ ಚಕ್ರದ ಎರಡನೆಯ ರಾಗ.ಇದರ ನೆನೆಪಿನ ಹೆಸರು ಆದಿತ್ಯ-ಶ್ರಿ ನೆನಪಿನ ನುಡಿಕಟ್ಟು:ಸ ರು ಗು ಮಿ ಪ ಧ ನಿ ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೩ ಗ೩ ಮ೨ ಪ ದ೧ ನಿ೨ ಸ ಅವರೋಹಣ ಸ ನಿ೨ ದ೧ ಪ ಮ೨ ಗ೩ ರಿ೩ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಷಟ್‍ಶೃತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕೈಶಿಕಿ ನಿಷಾಧ.ಇದು ೩೨ನೆಯ ಮೇಳಕರ್ತ ರಾಗವಾದ ರಾಗವರ್ಧಿನಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಹಲವಾರು ರಚನೆಗಳಿದ್ದು, ಕೆಲವು ಆನಂದಮಾಯಮನವೆ- (ವಾಲಾಜಪೇಟೆ ವೆಂಕಟರಮಣ ಭಾಗವತರ್) ಗಾನಾಮೃತ ಪಾನಮ್- ಕೋಟೀಶ್ವರ ಅಯ್ಯರ್ ಜ್ಯೋತಿಸ್ವರೂಪಿಣಿ- ಪೆರಿಯಸಾಮಿ ತೂರನ್ ಶ್ರೀ ಗಾಯತ್ರಿ ಭಕ್ತ ದುರಿತ- ಎಂ. ಬಾಲಮುರಳಿ ಕೃಷ್ಣ ನನ್ನಬ್ರೋವು ಕಾಮಾಕ್ಷಿ == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಜ್ಯೋತಿ ಸ್ವರೂಪಿಣಿ ರಾಗಕ್ಕೆ ಅನ್ವಯಿಸಿದಾಗ ಯಾವುದೇ ರಾಗಗಳು ದೊರೆಯುವುದಿಲ್ಲ. == ಉಲ್ಲೇಖಗಳು ==